ವಿಶ್ವದ ಏಕೈಕ ಹೆಮ್ಮೆಯ ದೊಡ್ಡ ಸಂವಿಧಾನ ನಮ್ಮ ದೇಶಕ್ಕೆ ಕೂಟ್ಟಿದು ಅಂಬೇಡ್ಕರ: ಪತ್ತಾರ

Dr.|| Babasaheb Ambedkar Jayanti- Gurlapur

ಗುರ್ಲಾಪೂರ 15:  ಸೋಮವಾರ ಪಿ ಎಂ ಶ್ರೀ  ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುರ್ಲಾಪುರ ನಲ್ಲಿ  ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ ಅಂಬೇಡ್ಕರ ಇವರ ಜಯಂತಿಯನ್ನು ಆಚರಿಸಲಾಯಿತು. 

 ಮುಖ್ಯ ಶಿಕ್ಷಕರು  ಜಿ ಆರ್ ಪತ್ತಾರ, ಸಹ ಶಿಕ್ಷಕರು, ಶಾಲಾ ಅಭಿವೃದ್ಧಿ ಆಡಳಿತ ಮಂಡಳಿ ಅಧ್ಯಕ್ಷರು ಆದ  ಎಲ್ ಪಿ ನೆಮಗೌಡರ ಮತ್ತು ಸರ್ವ ಸದಸ್ಯರು, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಇವರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರರು ಅವರು ವಿಶ್ವದ ಏಕೈಕ ಹೆಮ್ಮೆಯ ದೊಡ್ಡ ಸಂವಿಧಾನ ನಮ್ಮ ದೇಶಕ್ಕೆ ಕೂಟ್ಟಿದು ಮರೆಯಲಾರದ ವರದಾನ ಎಂದು  ಜಿ ಆರ್ ಪತ್ತಾರ ಸರ್ ನುಡಿದರು. ಅನೇಕ ಡಿಗ್ರಿಗಳನ್ನು ಪಡೆದ ವಿಶ್ವದ ಏಕೈಕ ವ್ಯಕ್ತಿ, ವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ್, ಸಾಮಾಜಿಕ ಸಮಾನತೆ ಯನ್ನು ಎತ್ತಿ ಹಿಡಿದ ಹೆಮ್ಮೆಯ ರಾಜಕೀಯ ನಾಯಕ್ ಎಂದು  ಏಸ್ ಬೀ ದರೂರ್  ಹೇಳಿದರು.  

ಬಿ ವಾಯ್ ಮೋಮೀನ  ಎಲ್ಲಾ ಮಹನೀಯರನ್ನು ಸ್ವಾಗತ ಕೋರಿದರು,  ಬೀ ಬೀ ಸಸಾಲಟ್ಟಿ  ವಂದಿಸಿದರು, ಡಿ ವಿ ನಡೋನಿಯವರು ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ ಆರ್ ಸಾಲಿಮಠ, ಏ ಡಿ ಪಡಗಾನೂರ, ಕುಮಾರಿ ಕವಿತಾ ಕಟಗಿ, ಕುಮಾರಿ ವಿದ್ಯಾಶ್ರೀ ನೇಮಗೌಡಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.